Wednesday, February 09, 2011

golden star ganesh'(KOOL.ಕೂಲ್ ) Movie news

GOLDEN *STAR *GANESH

(KOOL.ಕೂಲ್ )

 Movie news

ವಿದೇಶಿ ನರ್ತಕಿಯರ ಜತೆ ಗಣೇಶ್

ಡಾನ್ಸ್ ರಾಜ್ ಡಾನ್ಸ್ ಕೂಲ್

        
ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ ‘ಕೂಲ್ ಚಿತ್ರದ ಎರಡು
ಹಾಡುಗಳ ಚಿತ್ರೀಕರಣ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ. ಕವಿರಾಜ್ ರಚನೆಯ "ಒಂದೇ
ಹುಡುಗಿ ಒಂದೇ ಲವ್ ಅನ್ನೋದೆಲ್ಲಾ ಬರೀ ಡವ್ ಪ್ರೀತಿಗಾಗಿ ಪ್ರಾಣ ನೀಡೋ ಪಾಪಿ ನಾನಲ್ಲ.."
ಎಂಬ ಗೀತೆಯ ಚಿತ್ರೀಕರಣ ಮೈಸೂರು ಲ್ಯಾಂಪ್ಸ್ ಅವರಣದಲ್ಲಿ ನಿರ್ಮಿಸಲಾಗಿರುವ ಅದ್ದೂರಿ
ಸೆಟ್‌ನಲ್ಲಿ ನಡೆಯಿತು. ನಾಯಕ ಗಣೇಶ್ ಹಾಗೂ ಆಸ್ಟ್ರೇಲಿಯಾ, ಲಂಡನ್ ನರ್ತಕಿಯರು ಈ
ಹಾಡಿಗೆ ಹೆಜ್ಜೆ ಹಾಕಿದರು.
ಅಮಿತಾಬ್ ಬಚ್ಚನ್, ರಜನಿಕಾಂತ್, ಗೋವಿಂದ ಮುಂತಾದ ಕಲಾವಿದರ ಸಿನಿಮಾಗಳಿಗೆ ನೃತ್ಯ
ನಿರ್ದೇಶನ ಮಾಡಿ ಖ್ಯಾತರಾಗಿರುವ ಶಂಕರ್ ಈ ಗೀತೆಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕಾಗಿ ಕವಿರಾಜ್ ಬರೆದಿರುವ ಮತ್ತೊಂದು ಗೀತೆ "ಚಂದ್ರನ ಚಂದವ ಸವಿಯುವ ಚೋರ ನಾನು
ರಸಿಕರ ಹೃದಯದ ರಾಜ ನಾನು..". ಈ ಗೀತೆಯ ಚಿತ್ರೀಕರಣ ಹೆಸರುಘಟ್ಟದ ಬಳಿಯ ಬಾಲಿವುಡ್
ಸ್ಟುಡಿಯೋದಲ್ಲಿ ನಡೆದಿದೆ. ವಿಷ್ಣುದೇವ್ ನೃತ್ಯ ನಿರ್ದೇಶನದ ಈ ಹಾಡಿನ ಚಿತ್ರೀಕರಣದಲ್ಲಿ
ನಾಯಕ ಗಣೇಶ್ ಹಾಗೂ ಮುಂಬೈ ನರ್ತಕಿಯರು ಭಾಗವಹಿಸಿದ್ದರು.
ನಟ ಗಣೇಶ್ ನಿರ್ದೇಶನದ ಚೊಚ್ಚಲ ಚಿತ್ರ 'ಕೂಲ್'ಗೆ ಖ್ಯಾತ ಛಾಯಾಗ್ರಾಹಕ ರತ್ನವೇಲು
ಕ್ಯಾಮೆರಾ ಹಿಡಿದಿದ್ದಾರೆ. 'ಘಜನಿ' ಖ್ಯಾತಿಯ ಸಂಕಲನಕಾರ ಆಂಟನಿಯವರ ಸಂಕಲನವಿದೆ.
ರಮೇಶ್‌ದೇಸಾಯಿ ಕಲಾ ನಿರ್ದೆಶನ, ವಿ.ಹರಿಕೃಷ್ಣರ ಸಂಗೀತ, ರವಿಶಂಕರ್ ನಿರ್ಮಾಣ
ನಿರ್ವಹಣೆ, ದತ್ತಣ್ಣ, ಯತೀಶ್‌ಕುಮಾರ್ ಮೇಲ್ವಿಚಾರಣೆ ಈ ಚಿತ್ರಕ್ಕಿದೆ. ಗಣೇಶ್,
ಸನಾಖಾನ್, ಸಾಧುಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು
ಚಿತ್ರದ ತಾರಾಗಣದಲ್ಲಿದ್ದಾರೆ.

No comments: