Friday, June 24, 2011

Ganesh Kool movie news ನನ್ನ ಲೈಫ್ ನನ್ನದುನನ್ನ ಲೈಫ್ ನನ್ನದು
"ಕೂಲ್‌'' ಸೋತಿದೆ. ಇದಕ್ಕೆ ಗಣೇಶ್‌ನ ಓವರ್‌ ಕಾನ್ಫಿಡೆನ್ಸ್‌ ಕಾರಣ ಅಂತಾರಲ್ಲ?
sarfaz manglore | Jun 24, 2011
 "ಕೂಲ್‌' ಸೋತಿದೆ. ಇದಕ್ಕೆ ಗಣೇಶ್‌ನ ಓವರ್‌ ಕಾನ್ಫಿಡೆನ್ಸ್‌ ಕಾರಣ ಅಂತಾರಲ್ಲ?

ಅದು ತಪ್ಪು. ಕಾನ್ಫಿಡೆನ್ಸ್‌ ಇತ್ತು. ಆದರೆ, ಓವರ್‌ ಕಾನ್ಫಿಡೆನ್ಸ್‌ ಇರಲಿಲ್ಲ. ಎಲ್ಲಾ ನಿರ್ದೇಶಕ, ನಟರಿಗೂ ತಮ್ಮ ಚಿತ್ರದ ಬಗ್ಗೆ ಹೇಗೆ ವಿಶ್ವಾಸ ಇರುತ್ತದೋ, ಅದೇ ರೀತಿ ನನಗೂ ಇತ್ತು. ಅದು ತಪ್ಪಾ? "ಕೂಲ್‌' ಚೆನ್ನಾಗಿ ಓಡಲಿಲ್ಲ, ಅದೇ ಕಾರಣಕ್ಕೆ ಎಲ್ಲಾ ನನ್ನತ್ತ ಬೊಟ್ಟು ಮಾಡುತ್ತಿದ್ದಾರೆ. ಒಂದು ವೇಳೆ ಚಿತ್ರ ಯಶಸ್ವಿಯಾಗಿದ್ದರೆ, ಈ ಮಾತೇ ಬರುತ್ತಿರಲಿಲ್ಲ. ಸೋತಾಗ ಯಾರೂ ಇರುವುದಿಲ್ಲ. ಇದೇ ಜೀವನ ಅಲ್ವಾ?
ಇತ್ತೀಚಿನ ನಿಮ್ಮ ಈ ಸೋಲಿಗೆ ನಿಮ್ಮ ಪತ್ನಿ ಶಿಲ್ಪಾ ಅವರೇ ಕಾರಣ, ನಿಮ್ಮ ಎಲ್ಲಾ ವಿಷಯಗಳಲ್ಲೂ ಅವರು ಮೂಗು ತೂರಿಸುತ್ತಾರೆ ಎಂಬ ಮಾತಿದೆಯಲ್ಲ?
ನೋಡ್ರಿ, ಯಾರು ಏನಾಂತರೆ ಅನ್ನೋದು ನನಗೆ ಮುಖ್ಯವಲ್ಲ. ನನ್ನ ಲೈಫ್ ನನ್ನದು. ಅಲ್ಲಾ, ಅವಳು ನಿರ್ಮಾಪಕಿಯಾಗಿ ಯಾವುದಾದರೂ ನಿರ್ಧಾರ ತಗೆದುಕೊಳ್ಳಬಾರದಾ? ಹಾಗಂತ ಅವಳು ನನ್ನ ಸಿನಿಮಾ ವಿಷಯಗಳಲ್ಲಿ ಯಾವತ್ತೂ ಇನ್ವಾಲ್‌Ì ಆಗಿಲ್ಲ. ನನ್ನ ನಿರ್ಧಾರ ನನ್ನದು. ಹಾಗೆ ನೋಡಿದರೆ ಸತತವಾಗಿ ಏಳು ಹಿಟ್‌ ಕೊಟ್ಟಿದ್ದೇನೆ. ಅಷ್ಟಕ್ಕೂ ಒಬ್ಬ ನಾಯಕನ ಎಲ್ಲಾ ಸಿನಿಮಾಗಳು ಗೆಲ್ಲಬೇಕೆಂದು ಬಯಸುವುದೇ ತಪ್ಪು.

ಗಣೇಶ್‌ ದಿಢೀರ್‌ ನಿರ್ಧಾರ ತಗೊಂಡು ನಿರ್ದೇಶನ ಮಾಡುವ ಅಗತ್ಯವಿರಲಿಲ್ಲ. ಯಾರೋ ಎತ್ತಿಕಟ್ಟಿದರೆಂಬ ಕಾರಣಕ್ಕೆ ನಿರ್ದೇಶನ ಮಾಡಿ ಕೈ ಸುಟ್ಟುಕೊಂಡರೆಂಬ ಮಾತಿದೆಯಲ್ಲ?

No comments: