ವಿಶ್ವಕಪ್ ಮಹಾತ್ಮೆ
ಕೂಲ್' ಲೈಟಾಗಿ ಲೇಟಾಗುತ್ತೆ: ಗಣೇಶ್ ...
ವಿಶ್ವಕಪ್ ಕ್ರಿಕೆಟ್ ಜ್ವರ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆತರಲು ಹರಸಾಹಸ ಪಡಬೇಕಾದ ದುಸ್ಥಿತಿ ಎದುರಾಗಿದೆ. ಆದರೂ ಹೊಸ ಕನ್ನಡಚಿತ್ರಗಳು ಎಗ್ಗಿಲ್ಲದೆ ಬಿಡುಗಡೆಗೊಳ್ಳುತ್ತಲೇ ಇವೆ. ನಿರೀಕ್ಷೆಯಂತೆ ನೆಲಕಚ್ಚುತ್ತಲೇ ಇವೆ!ಈ ವಿದ್ಯಮಾನಗಳನ್ನು ಕೂಲ್ ಆಗಿ ಅವಲೋಕಿಸುತ್ತಲೇ ಇರುವ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಚೊಚ್ಚಲ ನಿರ್ದೇಶನದ 'ಕೂಲ್' ಚಿತ್ರವನ್ನು ವಿಶ್ವಕಪ್ ಕ್ರಿಕೆಟ್ ಟೂರ್ನಿ ಮುಗಿದ ಬಳಿಕವೇ ತೆರೆಗೆ ತರಲು ನಿರ್ಧರಿಸಿದ್ದಾರೆ. ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ 'ಕೂಲ್' ಚಿತ್ರಕ್ಕೆ 72 ದಿನಗಳ ಚಿತ್ರಿಕರಣ ನಡೆದಿದೆ. ದುಬೈ, ಈಜಿಪ್ಟ್, ಜೋರ್ಡಾನ್ ಮತ್ತು ಮಧ್ಯ ಪ್ರಾಚ್ಯದ ಮರುಭೂಮಿಗಳಲ್ಲಿ 'ಕೂಲ್'ನ ಕೆಲವು ಹಾಡುಗಳ ಚಿತ್ರೀಕರಣ ನಡೆಸಲಾಗಿದೆ.ಮೈಸೂರು ಲ್ಯಾಂಪ್ಸ್ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ಗಳಲ್ಲಿ ವಿದೇಶಿ ನರ್ತಕಿಯರೊಂದಿಗೆ ನರ್ತಿಸುವ ಹಾಡನ್ನು ಚಿತ್ರೀಕರಿಸುವುದರೊಂದಿಗೆ ಗಣೇಶ್ ಅವರು 'ಕೂಲ್' ಚಿತ್ರದ ಚಿತ್ರೀಕರಣಕ್ಕೆ ಮಂಗಳ ಹಾಡಿದ್ದಾರೆ. ಚಿತ್ರಕ್ಕೆ 'ಘಜನಿ' ಖ್ಯಾತಿಯ ಸಂಕಲನಕಾರ ಆಂಟನಿ ಅವರ ಸಂಕಲನವಿದೆ. ರತ್ನವೇಲು ಅವರ ಛಾಯಾಗ್ರಹಣವಿದೆ. ವಿ.ಹರಿಕೃಷ್ಣರ ಸಂಗೀತವಿದೆ.ಗಣೇಶ್, ಸನಾಖಾನ್, ಸಾಧುಕೋಕಿಲ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. |