KOOL MOVIE FULL lyrics in Kannada
SONGS (no 03 )
ಚಿತ್ರ: ಕೂಲ್
ಹಾಡು:ನೋಡುತಾ ನೋಡುತಾ
ಸಾಹಿತ್ಯ: ಕವಿರಾಜ್ಹಾಡು:ನೋಡುತಾ ನೋಡುತಾ
ಗಾಯಕ: ಸೋನು ನಿಗಂ
ಸಂಗೀತ: ವಿ ಹರಿಕೃಷ್ಣ
ನೋಡುತಾ ನೋಡುತಾ ನಿನ್ನನೇ ನೋಡುತಾ...ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ...ಕಾಡುತಾ ಕಾಡುತಾ ಸವಿಯಾಗಿ ಕಾಡುತಾ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ...ನೋಡುತಾ ನೋಡುತಾ ನಿನ್ನನೇ ನೋಡುತಾ...ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...ಸಾವಿರಾ ಸ್ವರಗಳ ನುಡಿಸುವೆ ಒಮ್ಮೆಲೇ...ಸದ್ದನೂ ಮಾಡದೇ ನೀ ಕೇಳು ಒಮ್ಮೆ...ತುಂಟ ವಯಸ್ಸು ನಿನ್ನಲ್ಲಿ ಏನೋ ಹುಡುಕುವಾಗ
ಆ ಕಡೆ ನೀ ನೋಡದೇ ಸುಮ್ಮನೇ ಇರಬಾರದೇ..ಕಣ್ಣಿನಲ್ಲಿ ಧೂಳಂತ ನಾನು ನಟಿಸುವಾಗ
ಸೋಕಿಸಿ ನಿನ್ನುಸಿರನೂ ಸಾಯಿಸು ತುಸು ನನ್ನನು
ಕಂಗಳಾ ಸಮರವೋ ಉಸಿರಿನಾ ಶಾಕವೋ...ಒಲವಿನಾ ರಾಗವೋ...ಅರಿಯದಾ ಪುಳಕವೋ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ... ಜನಿಸುವಾ ಮುನ್ನವೇ ಹೃದಯವೂ ನಿನ್ನನೇ...ಹುಡುಕಿದಾ ಕಥೆಯನೂ ನಾ ಹೇಳಲೇನು
ಮಾತು ಸಾಕು ಅಂದಾಗ ಒಂದು ಸಣ್ಣ ಜಗಳಾ...ಸುಮ್ಮನೇ ಆರಂಭಿಸು ಆದರೇ ಬೇಗ ಮುಗಿಸು
ಹಾಂ... ಕಳ್ಳ ನಿದ್ದೆ ಬಂದಾಗ ನಿನ್ನ ಮಡಿಲಾ ಮೇಲೆ
ಹಾಯಾಗಿ ನಾ ಮಲಗಲೇ... ಹಾಗೇನೆ ಕನಸಾಗಲೇ...ಸುಮ್ಮನೇ ಕುಂತರೂ... ನಿನ್ನದೇ ತುಂತುರೂ...ತೀರದೆ ಎಂದಿಗೂ... ಪ್ರೀತಿಯಾ ಮಂಪರೂ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ...ನೋಡುತಾ ನೋಡುತಾ ನಿನ್ನನೇ ನೋಡುತಾ...ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ...ಕಾಡುತಾ ಕಾಡುತಾ ಸವಿಯಾಗಿ ಕಾಡುತಾ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ...
SONGS NO {04 }
ಚಿತ್ರ: ಕೂಲ್
ಹಾಡು:ನೀನು ನಿಂತರೆ
ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಕವಿರಾಜ್
ಗಾಯಕ: ಶಾನ್, ಅನುರಾಧ ಭಟ್
ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ಬಹಳ ದಿನಗಳ ನಂತರ ಸಡಗರ ಈ ಥರಾ...ನನ್ನ ಹೆಸರು ಇಷ್ಟು ಇದೆ ಚೆಂದ ಅನಿಸೋದೆ ನಿನ್ನ ದನಿಯಿಂದಾ...ಬದಲಾದೆ ನಾನು ನೀ ಬಂದ ಆನಂತರಾ...ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ಬಹಳ ದಿನಗಳ ನಂತರ ಸಡಗರ ಈ ಥರಾ...ನಿನ್ನ ಬೆನ್ನಲೆ ನಾನು ಬರೆಯಲೆ ಒಂದು ಹನಿಗವನ...ಸರಿ ನಿನ್ನಕಂಗಳ ಕನ್ನಡಿ ಹಿಡಿದೇ ಅದನು ಓದುವೆ ನಾ...ಹಿತ ಇಂಥಾ ಅನಾಹುತ... ಸಲ್ಲಾಪಕ್ಕೆ ಸುಸ್ವಾಗತಾ...ಭರವಸೆಗಳು ಯಾಕೇ ನೂರೂ...ಎದೆಗೊರೆಗಿಕೊ ಚೂರೆಚೂರೂ...ಸತಾಯಿಸು ಸತಾಯಿಸು ವಿನಾಕಾರಣಾ...ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ನನ್ನ ಕೈಗಳ ಅಷ್ಟು ಗೆರೆಗಳ ಮೇಲೆ ನಿನ್ ಹೆಸರೂ...ಈ ನಿನ್ನ ಪರಿಚಯ ಆದ ಮರುಕ್ಷಣ ನನ್ನ ಬದುಕು ಶುರೂ...ಇದೇನಿದು ಹೊಸ ಕಥೆ... ಅದೇ ನಿಜ ನಂಗೂ ಮತ್ತೆ...ನಗುನಗುತಲೆ ನಂಗೇ ನೀನು ಜ್ವರ ಬರಿಸುವೆ ಹೇಗೊ ಏನೋ...ಇದೋಂತರ ನಿರಂತರ ಸಿಹಿ ಸಂಕಟಾ...ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ಬಹಳ ದಿನಗಳ ನಂತರ ಸಡಗರ ಈ ಥರಾ...
No comments:
Post a Comment