GOLDEN STAR GANESH........ROMEO
ಭಟ್ಟರ ಹಾಡಿಗೆ ರೋಮಿಯೋ-ಜ್ಯೂಲಿಯಟ್ ನೃತ್ಯ
ಶೈಲೂ ಚಿತ್ರದ ಮೂಲಕ, ತಾನು 'ಸಕಲ ಪಾತ್ರಕ್ಕೂ ಸಲ್ಲುವ' ನಾಯಕ ಎಂಬುದನ್ನು ನಿರೂಪಿಸಿರುವ ಗೋಲ್ಡನ್ ಸ್ಟಾರ್ ಇದೀಗ 'ರೋಮಿಯೋ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೈಲೂ ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ಈ ಗೋಲ್ಡ್, ರೋಮಿಯೋ ಮೇಲೂ ಅಪಾರ ನಿರೀಕ್ಷೆ ಇಟ್ಟಿದ್ದಾರೆ.
ಗಣೇಶ್ ತಾನೊಬ್ಬ ಎಲ್ಲಾ 'ಬೈಟು ಬೆಡ್ ಶೀಟ್ ನಲ್ಲಿ ಒಂದೇ ತಲೆದಿಂಬು ಇಟ್ಕೊಂಡು ಸೀಲಿಂಗು ಫ್ಯಾನಿ ನೋಡಿ ಆಮೇಲಿಂದು ಆಮೇಲೆ' ಎಂಬ ಯೋಗರಾಜ ಭಟ್ ರ ಹಾಡು ಹೇಳಿ ವಠಾರದ ಮಂದಿ ಹೊಸದಾಗಿ ಮದುವೆಯಾಗಿ ಬಂದ ನಾಯಕ-ನಾಯಕಿಯನ್ನು ಸ್ವಾಗತಿಸುತ್ತಾರೆ.
ಗಣೇಶ್, ಭಾವನಾ, ಸುಧಾ ಬೆಳವಾಡಿ ಅಭಿನಯಿಸಿದ ಈ ಗೀತೆಯ ಚಿತ್ರೀಕರಣ 'ರೋಮಿಯೋ' ಚಿತ್ರಕ್ಕಾಗಿ ಯಶವಂತಪುರದ ಬಳಿ ನಡೆಯಿತು. ಪಿಸಿ ಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ವೈದಿ ಅವರ ಛಾಯಾಗ್ರಹಣವಿದೆ. (ಒನ್ ಇಂಡಿಯಾ ಕನ್ನಡ)
`ರೋಮಿಯೋ' ಚಿತ್ರೀಕರಣ ಮುಕ್ತಾಯ
ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್(ನಾಯಕ) ಹಾಗೂ ರಮೇಶ್‌ಕುಮಾರ್ ನಿರ್ಮಿಸುತ್ತಿರುವ `ರೋಮಿಯೋ' ಚಿತ್ರಕ್ಕೆ ಅರವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಪೂರ್‍ಣಗೊಂಡಿರುವ ಚಿತ್ರಕ್ಕೆ ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಫೆಬ್ರವರಿಯಲ್ಲಿ `ರೋಮಿಯೋ' ಹಾಡುಗಳ ಸೀಡಿ ಬಿಡುಗಡೆಯಾಗಲಿದೆ. ಚಿತ್ರ ಮಾರ್ಚ್‌ನಲ್ಲಿ ತೆರೆಗೆ ಬರಲಿದೆ.
ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗಣೇಶ್, ಭಾವನಾ(ಜಾಕಿ), ಅವಿನಾಶ್, ಸಾಧುಕೋಕಿಲಾ, ರಮೇಶ್‌ಭಟ್, ಮಿತ್ರ ರಂಗಾಯಣ ರಘು, ಸುಧಾಬೆಳವಾಡಿ ಮುಂತಾದವರಿದ್ದಾರೆ.
Golden Star Ganesh and Mallu girl Bhavana star Romeo is already making waves because of the positive feedback coming out of the artists working for the film. The film is directed by directed by Sekhar and already the entire shooting portions has been picturised.
The artists including Ganesh and Rangayana Raghu are going ga ga over the strength of dialogues written by young writer Nataraj who has been introduced through this film. The song picturisations have also become talk of the town now, with a significant budget spend and using of the state of the art equipments for picturising visually stronger songs. Arjun Janya is the music director of the film and audio will be hitting the market in a few days.
Romeo has been spoken about in the Kannada film industry now as a comeback vehicle for the Golden Star who had some bad releases recently including the heavily discarded Munjaane directed by S.Narayan.
Speaking to Chitraloka Mega Portal, both Ganesh and Rangayana Raghu expressed confidence that Romeo would be something like a trend setter in romantic comedies. Ganesh is quite confident that the film would reach the younger and family audience who are looking for something fresh and novel in comedy oriented films. “I think the song picturisations would also be much discussed in the film’ says Ganesh.
Now, Sekhar and his team are coming out with another innovative publicity for the film. A new song with be recorded for publicity purposes which will be recorded shortly by Arjun Janya. The special feature of this song written by “Alemaari’ director Santhu is that the song will be sung by Ganesh, Rangayana Raghu, Sadhu Kokila and music director Arjun Janya himself. And all these artists and music director Arjun Janya will be featured in the song.
Besides Ganesh and Bhavana, the film has Rangayana Raghu, Sadhu Kokila, Ramesh Bhat, Avinash, Mithra and Sudha Belawadi in important roles.
ಗಣೇಶ್ ಗೆದ್ರೆ 'ರೋಮಿಯೋ', ಸೋತ್ರೆ ದೇವದಾಸ್!
'ಮಳೆ'ಯಲ್ಲಿ ನೆಂದಿದ್ದ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಸೋಲು ಶೀತ-ನೆಗಡಿ ಎಲ್ಲವನ್ನೂ ತರುತ್ತಿದೆ. ಅವರ ಯುಗ ಮುಗಿಯೋದು ಗ್ಯಾರಂಟಿಯಾಗಿದೆ. ಅದೂ 11 ಸಿನಿಮಾಗಳು ನಿರಂತರವಾಗಿ ಸೋತ ನಂತರವೂ ಗೆಲುವಿನ ಬಾಗಿಲನ್ನು ಎಷ್ಟೆಂದು ತಟ್ಟಬಹುದು? ಹಾಗೆಂದೇ ಈ ಬಾರಿ ಫೀಲ್ಡಿಗಿಳಿದಿರುವ ಗಣೇಶ್, 'ರೋಮಿಯೋ' ಚಿತ್ರದಲ್ಲಿ ಹೇಗಾದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅದರ ಮೊದಲ ಅಂಗವೇ ಪ್ರಚಾರಕ್ಕಾಗಿ ಪಾಪ್ ಸ್ಟೈಲ್ ಹಾಡು!
'ರೋಮಿಯೋ'ದಲ್ಲೂ ಸೋತರೆ ಗಣೇಶ್ ನಾಯಕರಾಗಿ ಸೋತ ಚಿತ್ರಗಳ ಸಂಖ್ಯೆ 12ಕ್ಕೇರುತ್ತದೆ. ಅದೂ ಬೆನ್ನು ಬೆನ್ನಿಗೆ ಸೋತ ಸಿನಿಮಾಗಳು. ಅಚ್ಚರಿಯೆಂದರೆ, ಇದರ ಅರ್ಧದಷ್ಟು ಅಂದರೆ ಆರು ಸಿನಿಮಾಗಳು ಗೆದ್ದಿರುವ ಕ್ರೆಡಿಟ್ ಗಣೇಶ್ ಹೆಸರಿನಲ್ಲಿರೋದು. ಅವು ಅವರ ಆರಂಭದ ದಿನಗಳು. ಆಗ ಗಣೇಶ್ ಸಿನಿಮಾಗಳೆಂದರೆ ಭಾರೀ ಕ್ರೇಜ್ ಇತ್ತು.
ಗಣೇಶ್ ನಾಯಕನಾಗಿ ನಿರ್ಮಾಪಕ ಲಾಭ ಪಡೆದ ಕೊನೆಯ ಚಿತ್ರ ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ'. ಅದರ ನಂತರ ನಾಗಶೇಖರ್ ಅರಮನೆ, ಡಿ. ರಾಜೇಂದ್ರಬಾಬು ಬೊಂಬಾಟ್, ರವಿವರ್ಮ ಸಂಗಮ, ದಯಾಳ್ ಪದ್ಮನಾಭನ್ ಸರ್ಕಸ್, ದೇವರಾಜ್ ಫಳನಿ ಉಲ್ಲಾಸ ಉತ್ಸಾಹ, ಪ್ರೀತಮ್ ಗುಬ್ಬಿ ಮಳೆಯಲಿ ಜೊತೆಯಲಿ, ಮುಸ್ಸಂಜೆ ಮಹೇಶ್ ಏನೋ ಒಂಥರಾ, ಅವರದ್ದೇ ನಿರ್ದೇಶನದ ಕೂಲ್, ಸುನಿಲ್ ಕುಮಾರ್ ಸಿಂಗ್ ಮದುವೆ ಮನೆ, ಎಸ್. ನಾರಾಯಣ್ ಶೈಲೂ ಮತ್ತು ಮುಂಜಾನೆ -- ಹೀಗೆ ಸಾಲು ಸಾಲು ಸೋಲು.
ಸದ್ಯ ಗಣೇಶ್ ಕೈಯಲ್ಲಿ ಮಿ. 420 ಮತ್ತು ಸಕ್ಕರೆ ಎಂಬ ಎರಡು ಚಿತ್ರಗಳಿವೆ. ಇನ್ನೊಂದು 'ಮರೆಯುವ ಮುನ್ನ' ಎಂಬ ಪ್ರೊಜೆಕ್ಟ್ ಸಣ್ಣದಾಗಿ ಸದ್ದು ಮಾಡುತ್ತಿದೆ.
ಪ್ರಚಾರಕ್ಕೆಂದೇ ಪಾಪ್ ಗೀತೆ..!
ಕನ್ನಡದಲ್ಲಿ ಪ್ರಚಾರಕ್ಕೆಂದೇ ಹಾಡುಗಳನ್ನು ಮಾಡುವುದು ತುಂಬಾ ಅಪರೂಪ. ಆದರೆ 'ರೋಮಿಯೋ' ಟೀಮ್ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ. ಅದೂ ಪಾಪ್ ಶೈಲಿಯ ಕನ್ನಡ ಹಾಡು. ಅರ್ಜುನ್ ಜನ್ಯಾ ಸಂಗೀತದ ಈ ಹಾಡಿಗೆ ಸ್ವತಃ ಗಣೇಶ್, ಅರ್ಜುನ್ ಜನ್ಯಾ ಸೇರಿದಂತೆ ರಂಗಾಯಣ ರಘು, ಸಾಧು ಕೋಕಿಲಾ ದನಿಯಾಗಿದ್ದಾರೆ. ಕೊನೆಗೆ ಹಾಡಿನಲ್ಲಿ ಕುಣಿದಿರುವುದು ಕೂಡ ಅವರೇ ಅಂತೆ.
ಕಂಠೀರವ ಸ್ಟುಡಿಯೋದಲ್ಲಿ ವಿಶಿಷ್ಟವಾಗಿ ಚಿತ್ರಿಸಲಾಗಿರುವ ಈ ಹಾಡಿಗೆ ಪಾಪ್ ಸ್ಪರ್ಶ ನೀಡಲಾಗಿದೆ. ಗ್ರಾಫಿಕ್ಸ್ ಸೇರಿಸಿ ಶ್ರೀಮಂತಗೊಳಿಸಿರುವುದು ಕೂಡ ವಿಶೇಷ. ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ ಸಿನಿಮಾದಲ್ಲಿ ಎಲ್ಲಾದರೂ ಸೇರಿಸುವ ಯೋಚನೆಯೂ ಚಿತ್ರತಂಡಕ್ಕಿದೆ.
ಅಂದ ಹಾಗೆ, 'ರೋಮಿಯೋ' ಚಿತ್ರವನ್ನು ನಿರ್ದೇಶಿಸಿರುವುದು ಪಿ.ಸಿ. ಶೇಖರ್. ಮಲಯಾಳಂ ಕುಟ್ಟಿ 'ಜಾಕಿ' ಭಾವನಾ ನಾಯಕಿ. ನವೀನ್ ಮತ್ತು ರಮೇಶ್ ಕುಮಾರ್ ಎಂಬುವವರು ನಿರ್ಮಾಪಕರು. ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.
ರೊಮ್ಯಾಟಿಕ್ ಕಥೆಯಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಅತ್ಯುತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. 'ರೋಮಿಯೋ' ಮೂಲಕ ಗಣೇಶ್‌ಗೆ ಹಿಡಿದಿರುವ ಸೋಲಿನ ಗ್ರಹಚಾರ ಬಿಡುಗಡೆಯಾಗಲಿದೆ ಎಂದೇ ನಿಕಟ ಮೂಲಗಳು ಹೇಳುತ್ತಿವೆ. ಗುಡ್ ಲಕ್ ಗಣೇಶ್.
http://kannada.webdunia.com/entertainment/regionalcinema/newsgossips/1204/18/1120418017_1.htm
No comments:
Post a Comment